“ಯಯಾತಿ” ನಾಟಕವನ್ನು ಗಿರೀಶ್ ಕಾರ್ನಾಡ್ ರವರು ರಚಿಸಿದ್ದು, ನಾಟಕದಲ್ಲಿ ಬರುವ ಪ್ರಮುಖ ಪಾತ್ರಗಳೆಂದರೆ, ಯಯಾತಿ-ಆರ್ಯವರ್ತ ರಾಜ, ದೇವಯಾನಿ-ಯಯಾತಿ ಪತ್ನಿ ಹಾಗೂ ಶಂಕರಾಚಾರ್ಯರ ಮಗಳು, ಪುರು-ಯಯಾತಿಯ ಮಗ, ಚಿತ್ರಲೇಖಾ-ಪುರು ಪತ್ನಿ, ಶರ್ಮಿಷ್ಠ-ದೇವಯಾನಿಯ ಬಾಲ್ಯದ ಗೆಳತಿ, ಸ್ವರ್ಣಲತಾ-ದೇವಯಾನಿಯ ಸೇವಕಿ. ವಿಕೃತ ಮನಸ್ಥಿತಿಯಿಂದ ಒಂದು ಕುಟುಂಬವು ಹೇಗೆ ನಾಶವಾಗುತ್ತದೆ ಎಂಬುದನ್ನು ಈ ಯಯಾತಿ ನಾಟಕದಲ್ಲಿ ತಿಳಿಯಬಹುದಾಗಿದೆ. ಇಲ್ಲಿ ಯಯಾತಿಯ ಸ್ವಾರ್ಥ ಮನಸ್ಥಿಯ ವ್ಯಕ್ತಿತ್ವವನ್ನು ಈ ನಾಟಕದಲ್ಲಿ ನೋಡಬಹುದುದಾಗಿದೆ. ಕೇವಲ ತನ್ನ ವೈಯಕ್ತಿಕ ಸೌಂದರ್ಯಕ್ಕೆ ಮಾತ್ರ ಆದ್ಯತೆ ನೀಡಿ ಇತತರಿಗೆ ನೋವು ನೀಡುವ ಕೀಳುತನವು ಎದ್ದು ಕಾಣುತ್ತದೆ. ಯಯಾತಿಯ ಒಂದು ನಿರ್ಧಾರದಿಂದ ಸುಂದರ ರಾಜ ಕುಟುಂಬದ ನಿಮ್ಮದಿ ಹಾಳಾಗುತ್ತದೆ. ಯೌವ್ವನವೇ ಜೀವನದ ಮುಖ್ಯಭಾಗವಲ್ಲ. ಅದಕ್ಕೆ ಆದ ಒಂದು ಕಾಲ ಸಮಯವಿರುತ್ತದೆ. ಆಗ ಮಾತ್ರ ಜೀವನದಲ್ಲಿ ಅದಕ್ಕೆ ಒಂದು ಬೆಲೆ ಇರುತ್ತದೆ ಎಂಬುದು ಅಂತಿಮವಾಗಿ ಯಯಾತಿ ಅರ್ಥವಾಗುತ್ತದೆ. ಯಯಾತಿಯ ಸ್ವಾರ್ಥತೆಯ ಪರಾಮವಧಿಯಿಂದ ತನ್ನ ಮಗನ ಜೀವನ ಕೂಡ ವಿನಾಶವಾಗುತ್ತಿತ್ತು. ಪ್ರತಿಯೊಬ್ಬರಿಗೂ ಆಸೆ ಇರಬೇಕು, ಆದ್ರೆ ಅತಿಯಾಸೆ ಇರಬಾರದು. ಯಯಾತಿ ತನ್ನ ಮಗ ಯೌವ್ವನವನ್ನು ಕೊಡ್ತೇನೆ ಅಂದಾಗ ಯಯಾತಿ ಮನಸ್ಸು ಕರಗಿ ಯೌವ್ವನವನ್ನು ತ್ಯಜಿಸಿದ್ದರೆ ನಿಜವಾಗಲು ಯಯಾತಿ ಆ ರಾಜ್ಯದಲ್ಲಿ ಶ್ರೇಷ್ಠ ರಾಜನಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುಬಹುದಿತ್ತು. ಆದರೆ ವಿಕೃತ ಮನಸ್ಥಿತಿಯ ವ್ಯಕ್ತಿತ್ವ ಅರಮನೆಯನ್ನೇ ದುಃಖ ಮಡಿವಿನಲ್ಲಿ ಮುಳುಗಿಸುತ್ತದೆ. ಮಗನ ಸಂಸಾರ ವಿನಾಶದ ಕೂಪಕ್ಕೆ ತಳ್ಳುತ್ತದೆ. ಇಲ್ಲಿ ಪುರುವಿನ ಪ್ರಾಮಾಣಿಕತೆ, ನಿಸ್ವಾರ್ಥ ಮನೋಭಾವ, ವೈಯಕ್ತಿಕ ಹಿತಾಸಕ್ತಿಗೆ ಆದ್ಯತೆ ಕೊಡದೆ, ತನ್ನ ತಂದೆ ಚೆನ್ನಾಗಿರಲಿ ಅನ್ನೋ ತ್ಯಾಗ ಮನೋಭಾವದ ಮನಸ್ಥಿತಿ ನಿಜಕ್ಕೂ ಮೆಚ್ಚಲೇ ಬೇಕು. ದೇಹದ ಸೌಂದರ್ಯಕ್ಕೆ ಬೆಲೆಕೊಡದೆ ಆತ್ಮದ ಸೌಂದರ್ಯಕ್ಕೆ ಬೆಲೆ ಕೊಟ್ಟಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಅನ್ನೋ ತಾತ್ಪರ್ಯ ನಿಜಕ್ಕೂ ಯಯಾತಿ ತಿಳಿದಿದ್ದರೆ ಆತನ ಹೀಗೆ ಮಾಡ್ತಾ ಇರಲಿಲ್ಲ. ತನ್ನ ಮಗ ಮತ್ತು ಸೊಸೆಯ ಜೊತೆ ನಗುನಗುತ್ತಾ ಸಂತಸದಿAದ ಜೀವನ ಸಾಗಿಸಬಹುದಿತ್ತು. ಹಾಗೆ ನಾವೆಲ್ಲರೂ ಸ್ವಾರ್ಥ ಬದುಕನ್ನು ತ್ಯಜಿಸಿ ನಿಸ್ವಾರ್ಥ ಜೀವನ ನಡೆಸಿದಾಗ ಮಾತ್ರ ನಾವು ಮತ್ತು ನಮ್ಮ ಜೊತೆಯಲ್ಲಿರುವ ಎಲ್ಲರೂ ಸಹ ನೆಮ್ಮದಿಯಿಂದ ಸುಂದರ ಸಂಸಾರ ನಡೆಸುತ್ತಾರೆ.

1. Introduction

2. Main Lesson Videos 

2a. Drama Introduction 

2b. Debates Discussion 

3. Activities

Ashraya – Cafe Sensorium – Book Club – Yayati – Drama Script

Ashraya – Cafe Sensorium – Book Club – Yayati – Quiz, Story Theme and Debate Questions

5. Club Session

6. Sample Submissions

7. Path Forward for Learning

8. External Links