1. Introduction

“ನಂಬಿಕೆಯ ಉಯ್ಯಾಲೆ” ನಾಟಕವನ್ನು ವಾಸುಕಿಸುಬ್ಬರಾವ್ ರವರು ರಚಿಸಿದ್ದು, ಇದರಲ್ಲಿ ಬರುವ ಪ್ರಮುಖ ಪಾತ್ರಳೆಂದರೆ, ರೈತನಾದ ರಂಗಣ್ಣ. ಆತನ ಹೆಂಡತಿ ಸಾವಿತ್ರಿ ಹಾಗೂ ಗೊಂಬೆಯು ಮಗುವಿನ ಪಾತ್ರವನ್ನು ನಿರ್ವಹಿಸುತ್ತದೆ. ಚೆನ್ನಪ್ಪ ಮತ್ತು ಚೆನ್ನಮ್ಮ ರಂಗಣ್ಣನ ಪಕ್ಕದ ಮನೆಯವರು. ಪಂಡಿತ್ ಅರ್ಚಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ನಾಟಕದಲ್ಲಿ ರಂಗಣ್ಣ ಮತ್ತು ಸಾವಿತ್ರಿ ದಂಪತಿಗೆ ಮಕ್ಕಳಿರದ ಕಾರಣ ಒಂದು ಗೊಂಬೆಯನ್ನೇ ತಮ್ಮ ಮಗುವೆಂದು ನಂಬಿಕೆಯಿಂದ ಜೀವನ ನಡೆಸುತ್ತಿದ್ದರು. ನಂಬಿಕೆಯೇ ಈ ನಾಟಕದ ಮುಖ್ಯ ವಿಷಯವಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ ನಂಬಿಕೆಯಿಂದಲೇ ತಮ್ಮ ಜೀವನ ನಡೆಸುತ್ತಿರುತ್ತಾರೆ. ಪ್ರತಿಯೊಂದು ಕುಟುಂಬದಲ್ಲೂ ಒಂದಲ್ಲ ಒಂದು ನೋವು, ಸಮಸ್ಯೆಗಳು ಇದ್ಧೇ ಇರುತ್ತದೆ. ಆ ನೋವವನ್ನು ಪರಿಹರಿಸಲು ದೇವರನ್ನು ಬೇಡುತ್ತಾರೆ. ಆ ದೇವರು ಅವರ ಸಮಸ್ಯೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆಯಿಂದ ಪ್ರಾರ್ಥಿಸುತ್ತಾರೆ. ಈ ನಾಟಕವನ್ನು ಓದಿದ ನಂತರ ನೀವು ಪವಾಡಗಳನ್ನು ನಂಬುತ್ತೀರಾ ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು. ಸಾವಿತ್ರಿ ತನ್ನ ಗೊಂಬೆಯನ್ನು ಸ್ವಂತ ಮಗುವಿನಂತೆ ಪರಿಗಣಿಸಿದ್ದನ್ನು ನೀವು ಸಮರ್ಥಿಸುವಿರಾ? ನೀವು ದೇವರು ಇದ್ದಾರೆ ಎಂದು ನಂಬುತ್ತೀರಾ ಅಥವಾ ಇಲ್ಲವೇ? ಹೀಗೆ ಹಲವು ಪ್ರಶ್ನೆಗಳು ನಾಟಕವನ್ನು ಓದಿದ ನಂತರ ಉದ್ಭವಿಸುತ್ತದೆ. ಜೀವನ ನಡೆಸಲು ನಂಬಿಕೆ ಮುಖ್ಯವಾಗಿದ್ದು, ವ್ಯಕ್ತಿ, ವಸ್ತುಗಳನ್ನು ತರ್ಕಬದ್ಧ ಮತ್ತು ತಾರ್ಕಿಕತೆಯಿಂದ ತುಲನೆ ಮಾಡಿ ನಂಬಬೇಕು. ದೇವರಲ್ಲಿ ನಂಬಿಕೆ, ಧರ್ಮದಲ್ಲಿ ನಂಬಿಕೆಯು ಇವುಗಳು ವೈಯಕ್ತಿಕ ಮತ್ತು ವ್ಯಕ್ತಿಗತವಾದದ್ದು, ಆದರೆ ಕೆಲವೊಂದು ನಂಬಿಕೆಗಳು ಜೀವನದ ದಿಕ್ಕನ್ನೇ ಬದಲಾಯಿಸುವುದರಲ್ಲಿ ಸಂಶಯವಿಲ್ಲ. ಹಾಗೆಯೇ ನಂಬಿಕೆಯ ಉಯ್ಯಾಲೆ ನಾಟದಲ್ಲಿ ಸಾವಿತ್ರಿಯ ನಂಬಿಕೆಯು ಹುಸಿಯಾಗುವುದಿಲ್ಲ.

2. Main Lesson Videos 

2a. Drama Introduction 

2b. Debates Discussion 

3. Activities

Ashraya – Cafe Sensorium – Book Club – Nambike Uyyale – Drama Script

Ashraya – Cafe Sensorium – Book Club – Nambike Uyyale – Debate Questions and Quiz

5. Student demos

6. Sample Submissions

7. Path Forward for Learning

8. External Links