1. Introduction
ಸಂಧ್ಯಾಕಾಲ ನಾಟಕವನ್ನು ವಾಸುಕಿಸುಬ್ಬರಾವ್ ರವರು ರಚಿಸಿದ್ದು, ನಾಟಕದಲ್ಲಿ ಬರುವ ಪ್ರಮುಖ ಪಾತ್ರಗಳೆಂದರೆ, ದರ್ಜಿ ವ್ಯಾಪಾರಿಯಾದ ಚೆಂಗಪ್ಪ ಒಂದು ಟೈಲರ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಅವನ ಹೆಂಡತಿ ಕಾವೇರಿ. ಇವರ ಮಕ್ಕಳಾದ ಕೃಷ್ಣ ಮತ್ತು ಗಂಗಿ. ಶ್ರೀಮಂತ ವ್ಯಕ್ತಿ, ವಯಸ್ಕ ಪುರುಷ ಸೈನಿಕ, ಕೇಶವ ಕೆಲಸಗಾರ ಹಾಗೂ ಹದಿಹರೆಯದ ಇಬ್ಬರು ಗ್ಯಾಲಿಗರು ಪುರುಷರು ಈ ನಾಟಕದಲ್ಲಿ ಕಂಡು ಬರುತ್ತಾರೆ. ಮಧ್ಯಕಾಲೀನ ಭಾರತದಲ್ಲಿ ಒಮ್ಮೆ ಎರಡು ನೆರೆಯ ಕುಲಗಳಾದ ಗಲಿಗಾ ಮತ್ತು ಚೆರಿಗಾ ಎಂಬ 2 ಸಾಮ್ರಾಜ್ಯಗಳು ಇದ್ದವು. ಅವು 20-30 ವರ್ಷಗಳಿಂದ ಹೋರಾಡುತ್ತಿದ್ದವು. ಅವರು ಯುದ್ಧ ಮಾಡಿದಾಗ, ವಿಜೇತರು ಎರಡೂ ರಾಜ್ಯಗಳನ್ನು ಆಳುತ್ತಾರೆ. ಮುಂದಿನ 30 ವರ್ಷಗಳವರೆಗೆ ವಿಜಯಿಯಾದ ರಾಜನು ಎರಡೂ ಕುಲಗಳ ಮೇಲೆ ಆಳ್ವಿಕೆ ನಡೆಸುತ್ತಾನೆ ಸೋತ ರಾಜನನ್ನು ಗಡಿಪಾರು ಮಾಡುತ್ತಾರೆ. ಗೆದ್ದ ಕುಲವು ಸೋತ ಕುಲವನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸುತ್ತದೆ. ಸೋತ ಕುಲವು ತೊಂದರೆಗಳನ್ನುAಟುಮಾಡಲು ಒಮ್ಮೆಯಾದರೂ ದಂಗೆಗಳನ್ನು ನಡೆಸುವುದು ಹಲವು ಶತಮಾನಗಳಿಂದ ಮುಂದುವರೆದಿದೆ. ಈ ನಾಟಕದಲ್ಲಿ ಚೆರಿಗಾರು ವಿಜಯಶಾಲಿಗಳು ಮತ್ತು ಗೆಲಿಗಾರು ಸೋತವರು. ಈ ನಾಟಕದಲ್ಲಿ ಬೆಳಕು ಗೊಂದಲವನ್ನು ಉಂಟು ಮಾಡುತ್ತದೆ. ಸೂರ್ಯನ ಬೆಳಕಿನಿಂದಾಗಿ ಹಗಲು-ಇರುಳಿನ ವ್ಯತ್ಯಾಸ ತಿಳಿಯದೆ ಚೆಂಗಪ್ಪನ ಮನಸ್ಥಿತಿ ಬದಲಾಗುತ್ತಿರುತ್ತದೆ. ಈ ನಾಟಕದಲ್ಲಿ ಮನುಷ್ಯನ ವೈಯಕ್ತಿಕ ಹಿತಾಸಕ್ತಿ ಎದ್ದುಕಾಣುತ್ತದೆ. ಒಂದು ಪಂಗಡವನ್ನು ಮತ್ತೊಂದು ಪಂಗಡವು ದ್ವೇಷಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ದ್ವೇಷದಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಸೃಷ್ಠಿಯಾಗಿ ಬದುಕನ್ನೇ ನಾಶಪಡಿಸುತ್ತದೆ. ಹಾಗೂ ಪ್ರತಿಯೊಬ್ಬರೂ ಪ್ರೀತಿ-ವಿಶ್ವಾಸದಿಂದ ಸಹಬಾಳ್ವೆ ನಡೆಸಿದರೆ ಜೀವನದಲ್ಲಿ ಜಗಳವಿಲ್ಲದೇ ಸಂತೋಷದಿಂದ ಜೀವನ ಸಾಗಿಸಬಹುದು.2. Main Lesson Videos
2a. Drama Introduction
2b. Debates Discussion
3. Activities
Ashraya – Cafe Sensorium – Book Club – Sandhya Kala – Drama Script
Ashraya – Cafe Sensorium – Book Club – Sandhya Kala – Debate Questions and Quiz
5. Student demos
6. Sample Submissions
7. Path Forward for Learning
8. External Links